ಸಿರಿಗೆರೆ
	      ಭಾರತದ ಕರ್ನಾಟಕ ರಾಜ್ಯದ ಚಿತ್ರದುರ್ಗ ತಾಲ್ಲೂಕಿನ ಒಂದು ಗ್ರಾಮ. ಚಿತ್ರದುರ್ಗಕ್ಕೆ  ವಾಯವ್ಯದಲ್ಲಿ 32 ಕಿಮೀ ದೂರದಲ್ಲಿದೆ.	ಈ ಊರಿನಲ್ಲಿ ತರಳಬಾಳು ಸಂಪ್ರದಾಯದ ಪ್ರಸಿದ್ಧ ವೀರಶೈವ ಮಠವಿದೆ. ಇದು ಹಿಂದೆ ಉಜ್ಜಯಿನಿ ಪೀಠಕ್ಕೆ ಸೇರಿತ್ತೆಂದು ತಿಳಿದು ಬರುತ್ತದೆ. ಈ ಮಠ ಸಾರ್ವಜನಿಕ ಸೇವೆಗೆ ಹೆಸರಾಗಿದೆ. ಶಿಶುವಿಹಾರದಿಂದ ಕಾಲೇಜು ಮಟ್ಟದವರೆಗೆ ಶಿಕ್ಷಣ ಸಂಸ್ಥೆಗಳನ್ನೂ ನಡೆಸುತ್ತಿದೆ. ಅಧ್ಯಾಪಕರ ಶಿಕ್ಷಣಕ್ಕಾಗಿ ಚಿತ್ರದುರ್ಗದಲ್ಲಿ ಪದವಿಮಟ್ಟದ ಪ್ರಶಿಕ್ಷಣ ಕಾಲೇಜನ್ನೂ ಸ್ಥಾಪಿಸಲಾಗಿದೆ. ರಾಜ್ಯದ ಅನೇಕ ಕಡೆ ತರಳಬಾಳು ಜಗದ್ಗುರು ವಿದ್ಯಾರ್ಥಿನಿಲಯಗಳಿವೆ. ಇಲ್ಲಿ ಈ ಮಠಕ್ಕೆ ಸೇರಿದ ಒಂದು ಅನಾಥಾಲಯವಿದೆ. ಈ ಮಠದ ಹಿಂದಿನ ಅನೇಕ ಪೀಠಾಧ್ಯಕ್ಷರು ವಿದ್ವಾಂಸರಾಗಿದ್ದು ವೀರಶೈವ ಧರ್ಮ ಮತ್ತು ಸಂಸ್ಕøತಿಗಳಿಗೆ ಸಂಬಂಧಿಸಿ ದಂತೆ ಅನೇಕ ವ್ಯಾಖ್ಯಾನ ಗ್ರಂಥಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಮಾಘಮಾಸದ ವ್ಯಾಸಪೂರ್ಣಿಮೆಯ ದಿನ ನಡೆಯುವ ಇಲ್ಲಿನ ತರಳಬಾಳು ಹುಣ್ಣಿಮೆ ಉತ್ಸವದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುತ್ತಾರೆ.				
			(ಎಸ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ